ಕಾನ್‍ಸ್ಟಾಂಟಿನಫ್, ಅಲೆಕೊ

1863-1897. ಬಲ್ಗೇರಿಯದ ಕಥೆಗಾರ. ರಷ್ಯದಲ್ಲಿಯೇ ವಿದ್ಯಾಭ್ಯಾಸ ಮಾಡಿದ. ತನ್ನ ಜೀವನದ ಕೊನೆಯ ವರ್ಷಗಳಲ್ಲಿ ಸಾಹಿತ್ಯರಚನೆಯನ್ನು ಆರಂಭಿಸಿ ಹತ್ತು ವರ್ಷಗಳಲ್ಲೇ ಬಲ್ಗೇರಿಯದ ಅತಿಶ್ರೇಷ್ಠ ಕಥೆಗಾರನೆನಿಸಿದ. ಈತನ ವಿಡಂಬನೆ ತೀಕ್ಷ್ಣವಾದುದು. ಬಲ್ಗೇರಿಯದ ಸಾಮಾನ್ಯ ರೈತನನ್ನು ನಿರ್ದಯವಾಗಿ ವಿಡಂಬನೆ ಮಾಡಿದ್ದಾನೆ. ಕೆಲಕಾಲ ಪತ್ರಿಕೋದ್ಯಮಿಯಾಗಿದ್ದ. ಪ್ರವಾಸ ಸಾಹಿತ್ಯ ಬರೆದಿದ್ದಾನೆ. ರಾಜಕೀಯ ಪ್ರವಾಸ ಕೈಗೊಂಡಿದ್ದಾಗ ಈತ ಕೊಲೆಯಾದ.    

  (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ